ಮಂಗಳೂರು: ಆದ್ಯತೆ ಮೇರೆಗೆ ಲಸಿಕೆ ಲಭ್ಯತೆ

 ಮಂಗಳೂರು: ಆದ್ಯತೆ ಮೇರೆಗೆ ಲಸಿಕೆ ಲಭ್ಯತೆ
Share this post

ಮಂಗಳೂರು, ಮೇ 11, 2021: ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ, ದಕ್ಷಿಣ ಕನ್ನಡ ಜಿಲ್ಲೆಗೆ ಸರಬರಾಜಾದ ಲಸಿಕೆಯಲ್ಲಿ 45 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ, ಎರಡನೇ ಡೋಸ್ ಲಸಿಕೆಯನ್ನು  ನೀಡಲಾಗಿದ್ದು, ಮೇ 12 ರಿಂದ ಲಸಿಕೆಯ ಲಭ್ಯತೆ ಇಲ್ಲದಿರುವುದರಿಂದ ಜಿಲ್ಲೆಯ ಯಾವುದೇ ಪ್ರಾಥಮಿಕ ಆರೋಗ್ಯ ಕೆಂದ್ರ/ ನಗರ ಆರೋಗ್ಯ ಕೆಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಲಸಿಕಾ ಶಿಬಿರವು ನಡೆಯುವುದಿಲ್ಲ.

ಜಿಲ್ಲೆಗೆ ಲಸಿಕೆ ಸರಬರಾಜು ಆದ ನಂತರ ಶಿಬಿರದ ಮುಂದಿನ ದಿನಾಂಕವನ್ನು ತಿಳಿಸಲಾಗುವುದು.

18 ವರ್ಷದಿಂದ 44 ವರ್ಷ ವಯೋಮಾನದವರಿಗೆ, ಜಿಲ್ಲಾ ವೆನ್ಲಾಕ್ -ಆಸ್ಪತ್ರೆ ಹಾಗೂ 4 ತಾಲೂಕು ಆಸ್ಪತ್ರೆಗಳಲ್ಲಿ ಮುಂದಿನ  ಆರು ದಿನಗಳವರೆಗೆ (17-05-2021) ಲಸಿಕೆಯನ್ನು ನೀಡಲಾಗುವುದು.

COWIN ನಲ್ಲಿ ರಿಜಿಸ್ಟ್ರೇಷನ್ ಮಾಡಿ ಅಪಾಯಿಂಟ್ಮೆಂಟ್ ಷೆಡ್ಯೂಲ್  ಮಾಡಿ, 4 ಡಿಜಿಟ್ ನ ಸೆಕ್ಯೂರಿಟಿ ಕೋಡ್ ಬಂದವರಿಗೆ ಮಾತ್ರ ಲಸಿಕೆ ತೆಗೆದುಕೊಳ್ಳಲು ಅವಕಾಶವಿರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆರೋಗ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!