ರೈತ ಸಂಪರ್ಕ ಕೇಂದ್ರಗಳ ಕಾರ್ಯನಿರ್ವಹಣೆ ಅವಧಿ ಪರಿಷ್ಕರಣೆ

 ರೈತ ಸಂಪರ್ಕ ಕೇಂದ್ರಗಳ ಕಾರ್ಯನಿರ್ವಹಣೆ ಅವಧಿ ಪರಿಷ್ಕರಣೆ
Share this post

ಉಡುಪಿ, ಮೇ 10, 20221: ಜಿಲ್ಲೆಯ ಎಲ್ಲಾ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳು ಲಾಕ್‌ಡೌನ್ ಅವಧಿಯಲ್ಲಿ ಅಂದರೆ ಮೇ 10 ರಿಂದ ಮೇ 24 ರ ವರೆಗೆ ಪ್ರತಿನಿತ್ಯ (ರಜೆ ದಿನ ಹೊರತುಪಡಿಸಿ) ಬೆಳಗ್ಗೆ 6 ಗಂಟೆಯಿAದ ಬೆಳಗ್ಗೆ 10 ಗಂಟೆಯವರೆಗೆ ತೆರೆದಿರುತ್ತವೆ. ಸದರಿ ಬದಲಾದ ಕಚೇರಿ ಅವಧಿಯು ಕೋವಿಡ್-19 ಲಾಕ್‌ಡೌನ್ ಜಾರಿಯಲ್ಲಿರುವವರೆಗೆ ಇರುತ್ತದೆ.

ರೈತರು ಬದಲಾದ ಸಮಯವನ್ನು ಗಮನಿಸಿ ಮುಂಗಾರು ಹಂಗಾಮಿಗೆ ಅವಶ್ಯವಿರುವ ಬಿತ್ತನೆ ಬೀಜ ಹಾಗೂ ಕೃಷಿ ಪರಿಕರಗಳನ್ನು ರೈತ ಸಂಪರ್ಕ ಕೇಂದ್ರದಿಂದ ಪಡೆಯಬಹುದಾಗಿದೆ.

ರೈತ ಸಂಪರ್ಕ ಕೇಂದ್ರಕ್ಕೆ ಈ ಮೇಲ್ಕಂಡ ಸಮಯದಲ್ಲಿ ರೈತರು ಭೇಟಿ ನೀಡಿ ಕೋವಿಡ್-19ರ ನಿಯಂತ್ರಣಕ್ಕಾಗಿ ಸರಕಾರ ಹೊರಡಿಸಿರುವ ಎಲ್ಲಾ ಮಾರ್ಗಸೂಚಿಯನ್ನು ಅನುಸರಿಸಿ ಅಗತ್ಯ ಕೃಷಿ ಪರಿಕರ ಪಡೆದುಕೊಳ್ಳಬೇಕು.

ಲಾಕ್‌ಡೌನ್ ಅವಧಿಯಲ್ಲಿ ಕೃಷಿ ಸಂಬAಧಿತ ಸಮಸ್ಯೆಗಳ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳನ್ನು (ಕೋಟ-ಮೊ.ನಂ: 8277929753, ಬ್ರಹ್ಮಾವರ–ಮೊ.ನಂ. 8277932506, ಉಡುಪಿ-ಮೊ.ನಂ: 8277929751, ಕಾಪು–ಮೊ.ನಂ: 8277929752, ಕುಂದಾಪುರ–ಮೊ.ನಂ: 8277929754, ವಂಡ್ಸೆ– ಮೊ.ನಂ: 8277929755, ಬೈಂದೂರು-ಮೊ.ನಂ: 8277932520, ಕಾರ್ಕಳ–ಮೊ.ನಂ: 8277932523, ಅಜೆಕಾರು-ಮೊ.ನಂ: 8277932527)

ಅಥವಾ ಕೃಷಿ ಇಲಾಖೆಯ ತಾಲೂಕು ಸಹಾಯಕ ಕೃಷಿ ನಿರ್ದೇಶಕ (ಉಡುಪಿ-ಮೊ.ನಂ:8277932515, ಕುಂದಾಪುರ-ಮೊ.ನಂ: 8277929754, ಕಾರ್ಕಳ-ಮೊ.ನಂ: 8277932505) ಇವರನ್ನು ಸಂಪರ್ಕಿಸುವಂತೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!