ಕಾರವಾರ : ಅಂಗನವಾಡಿ ಕೇಂದ್ರಗಳ ಕುಂದುಕೊರತೆ ನಿವಾರಣೆಗೆ ಸಹಾಯವಾಣಿ

 ಕಾರವಾರ : ಅಂಗನವಾಡಿ ಕೇಂದ್ರಗಳ ಕುಂದುಕೊರತೆ ನಿವಾರಣೆಗೆ ಸಹಾಯವಾಣಿ
Share this post

ಕಾರವಾರ ಮೇ 06, 2021: ಅಂಗನವಾಡಿ ಕೇಂದ್ರಗಳಲ್ಲಿ ಫಲಾನುಭವಿಗಳಿಗೆ ವಿತರಿಸುವ ಆಹಾರ ವಿತರಣೆ, ಬಾಲ್ಯ ವಿವಾಹ, ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ದೂರುಗಳನ್ನು ತಕ್ಷಣ ನಿವಾರಿಸಲು ಜಿಲ್ಲಾ ಮಟ್ಟದಲ್ಲಿ ದೂರು ನಿರ್ವಹಣಾ ಸಹಾಯವಾಣಿಯನ್ನು ತೆರೆಯಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಜಿ. ಪದ್ಮಾವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಲಾಖೆಯಡಿ ಬರುವ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿನ ಕುಂದುಕೊರತೆಗಳನ್ನು ನಿವಾರಿಸಲು ಈ ಸಹಾಯವಾಣಿ ಸಹಕಾರಿಯಾಗಿದೆ.

ಸಾರ್ವಜನಿಕರು ಇದಕ್ಕೆ ಸಂಬಂಧಿಸಿದ ಯಾವುದೇ ದೂರುಗಳಿದ್ದರೂ ಸಹಾಯವಾಣಿ ಸಂಖ್ಯೆ: 08382-226761ಗೆ ಕಚೇರಿ ಸಮಯದಲ್ಲಿ ಸಂಪರ್ಕಿಸಿ ಮಾಹಿತಿ ನೀಡಬಹುದು ಎಂದಿದ್ದಾರೆ.

Subscribe to our newsletter!

Other related posts

error: Content is protected !!