ಕೃಷಿ ಸಂಜೀವಿನಿ: ರೈತರ ಸಮಸ್ಯೆಗೆ ಪರಿಹಾರ

ಮಂಗಳೂರು, ಮೇ 05, 2021: ರೈತರಿಗೆ ಕೃಷಿ ಸಂಬಂಧಿತ ಸಮಸ್ಯೆಗೆ ಪರಿಹಾರ ಪಡೆಯಲು ಅನುಕೂಲವಾಗುವಂತೆ ಕೃಷಿ ಸಂಜೀವಿನಿ ಎಂಬ ವಿನೂತನ ಯೋಜನೆಯು ಜಾರಿಗೆ ಬಂದಿದೆ.
ರೈತರು ತಮ್ಮ ಜಮೀನಿನಲ್ಲಿ ಮಣ್ಣು ಪರೀಕ್ಷೆ, ಕೀಟ ಮತ್ತು ರೋಗಗಳು ಸೇರಿದಂತೆ ಮತ್ತಿತರ ಸಮಸ್ಯೆಗಳು ಕಂಡು ಬಂದಲ್ಲಿ ಉಚಿತ ಸಹಾಯವಾಣಿ ಸಂಖ್ಯೆ: 155313 ಗೆ ಕರೆ ಮಾಡಬಹುದು.
ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯದ ಸಿಬ್ಬಂದಿಗಳು ಕರೆ ಮಾಡಿದ ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ನೀಡಲಿದ್ದಾರೆ.
ಸಹಾಯವಾಣಿ ಸಂಖ್ಯೆ ಸಂಪರ್ಕ ಆಗದೇ ಇದ್ದಲ್ಲಿ ದೂ.ಸಂ: 0824-243602/ 2423604ಗೆ ಕರೆ ಮಾಡಿ ರೈತರು ಈ ಯೋಜನೆಯ ಸದುಪಯೋಗ ಪಡೆಯುವಂತೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.