ದೇಶದಲ್ಲಿ ರೆಮ್‌ಡೆಸಿವಿರ್‌ ಉತ್ಪಾದನೆಯಲ್ಲಿ ಮೂರು ಪಟ್ಟು ಹೆಚ್ಚಳ

 ದೇಶದಲ್ಲಿ ರೆಮ್‌ಡೆಸಿವಿರ್‌ ಉತ್ಪಾದನೆಯಲ್ಲಿ ಮೂರು ಪಟ್ಟು ಹೆಚ್ಚಳ
Share this post

ರೆಮ್‌ಡೆಸಿವಿರ್ ಉತ್ಪಾದಿಸುವ ಘಟಗಳ ಸಂಖ್ಯೆಯೂ ಮೂರು ಪಟ್ಟು ಹೆಚ್ಚಾಗಿದೆ

ದೇಶದಲ್ಲಿ ರೆಮ್‌ಡೆಸಿವಿರ್‌ ಉತ್ಪಾದನೆಯನ್ನು ತ್ವರಿತ ಗತಿಯಲ್ಲಿ ಹೆಚ್ಚಿಸಲಾಗುತ್ತಿದೆ.  ಕೆಲವೇ ದಿನಗಳಲ್ಲಿ ಭಾರತವು ರೆಮ್‌ಡೆಸಿವಿರ್‌ ಉತ್ಪಾದನಾ ಸಾಮರ್ಥ್ಯದಲ್ಲಿ 3 ಪಟ್ಟು ಹೆಚ್ಚಳವನ್ನು ಸಾಧಿಸಿದೆ. ಶೀಘ್ರದಲ್ಲೇ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಸಾಧ್ಯವಾಗಲಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಹಾಯಕ ಸಚಿವ ಶ್ರೀ ಮನ್ ಸುಖ್ ಮಾಂಡವಿಯಾ ಇಂದು ಟ್ವೀಟ್ ಮಾಡಿದ್ದಾರೆ

2021ರ ಏಪ್ರಿಲ್ 12ರಂದು 37 ಲಕ್ಷ  ಇದ್ದ ಉತ್ಪಾದನೆಯು 2021ರ ಮೇ 4ರಂದು 1.05 ಕೋಟಿಗೆ ಏರಿದೆ.

ಬೇಡಿಕೆ ಹೆಚ್ಚಳದ ಹಿನ್ನೆಲೆಯಲ್ಲಿ, ರೆಮ್‌ಡೆಸಿವಿರ್‌ ಉತ್ಪಾದಿಸುವ ಘಟಕಗಳ ಸಂಖ್ಯೆಯೂ ಹೆಚ್ಚಾಗಿದ್ದು, 12 ಏಪ್ರಿಲ್ 2021 ರಂದು 20ರಷ್ಟಿದ್ದ ಘಟಕಗಳ ಸಂಖ್ಯೆ 4 ಮೇ 2021 ರಂದು 57ಕ್ಕೆ ಏರಿದೆ.

Subscribe to our newsletter!

Other related posts

error: Content is protected !!