ಉಡುಪಿ: ಆದ್ಯತೆ ಮೇರೆಗೆ 2ನೇ ಡೋಸ್ ಲಸಿಕೆ

 ಉಡುಪಿ: ಆದ್ಯತೆ ಮೇರೆಗೆ 2ನೇ ಡೋಸ್ ಲಸಿಕೆ
Share this post

ಉಡುಪಿ, ಮೇ 04, 2021: ಜಿಲ್ಲೆಯಲ್ಲಿ ಕೋವಿಶೀಲ್ಡ್ ಲಸಿಕೆಯ ದಾಸ್ತಾನು ಸಾಕಷ್ಟು ಇಲ್ಲದಿರುವುದರಿಂದ ಪ್ರಥಮ ಡೋಸ್ ಪಡೆದು 8 ವಾರ ಮೀರಿದವರು  ಒಟ್ಟು 947 ಅರ್ಹ ಫಲಾನುಭವಿಗಳಿದ್ದಾರೆ.

ಇವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಬೇಕಾಗಿರುವುದರಿಂದ ಪ್ರಥಮ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದು 8 ವಾರ ಮೀರಿದವರು ಆಶಾಕಾರ್ಯಕರ್ತೆಯರಿಗೆ ಕರೆ ಮಾಡಿ 2ನೇ ಡೋಸ್ ಲಸಿಕೆ ಪಡೆಯಬಹುದಾಗಿದೆ.

ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ ಲಭ್ಯವಿಲ್ಲದ್ದರಿಂದ, ರಾಜ್ಯದಿಂದ ಸರಬರಾಜಾದ ತಕ್ಷಣ ಪ್ರಥಮ ಡೋಸ್  ಪಡೆದು 6 ವಾರ ಮೀರಿದವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡುವ ಬಗ್ಗೆ ಆಶಾ ಕಾರ್ಯಕರ್ತೆಯರು,  ಆರೋಗ್ಯ ಸಿಬ್ಬಂದಿಯವರು ಸದರಿಯವರಿಗೆ ಕರೆ ಮಾಡಿ ಲಸಿಕೆ ಪಡೆಯಲು ಕ್ರಮವಹಿಸುತ್ತಾರೆ.

Also read: Udupi gets oxygen supply from Davangere

ಮುಂದಿನ ದಿನಗಳಲ್ಲಿ ಲಸಿಕೆಯು ಸರಬರಾಜಾದ ತಕ್ಷಣ ಪ್ರಥಮ ಡೋಸ್ ಪಡೆದವರಿಗೆ ಆದ್ಯತೆ ಮೇರೆಗೆ 2 ನೇ ಡೋಸ್ ನೀಡಲಾಗುವುದು. ಮತ್ತು ಜಿಲ್ಲ್ಲೆಗೆ ಸಾಕಷ್ಟು ಲಸಿಕೆ ಬಂದ ತಕ್ಷಣ ಆಶಾಕಾರ್ಯಕರ್ತೆಯರು ಸಾರ್ವಜನಿಕರಿಗೆ ಮಾಹಿತಿ ನೀಡುವುದರ ಮೂಲಕ ಪ್ರಥಮ ಡೋಸ್ ಲಸಿಕೆ ಪಡೆಯಲು ವ್ಯವಸ್ಥೆ ಮಾಡಲಾಗುವುದು.

ಅಲ್ಲಿಯವರೆಗೆ ಪ್ರಥಮ ಡೋಸ್ ಲಸಿಕೆ ಪಡೆಯಲು ಬಾಕಿ ಇರುವವರು ಆಸ್ಪತ್ರೆಗೆ ಹೋಗದೆ ಲಸಿಕೆಗಾಗಿ ಕಾಯಬೇಕು.

18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಲಸಿಕೆ ಖರೀದಿಸಿ ಸರಬರಾಜು ಮಾಡಿದ ನಂತರ ಪ್ರಾರಂಭಿಸಲಾಗುವುದು.

ಈ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಅಲ್ಲಿಯವರೆಗೆ selfregistration.cowin.gov.in ಅಥವಾ ಆರೋಗ್ಯ ಸೇತು ಆಪ್ ಮೂಲಕ ತಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿ ನೋಂದಣಿ ಮಾಡಬಹುದಾಗಿದೆ.

ಲಸಿಕೆ ನೀಡಲು ಪ್ರಾರಂಭವಾದಾಗ ಲಸಿಕಾ ಕೇಂದ್ರವನ್ನು ಆನ್‌ಲೈನ್ ಮೂಲಕ ಆಯ್ಕೆ ಮಾಡಿಕೊಳ್ಳಬೇಕು.

18 ರಿಂದ 44 ವಯಸ್ಸಿನವರೆಗಿನ ಫಲಾನುಭವಿಗಳಿಗೆ ಆನ್‌ಲೈನ್ ರಿಜಿಸ್ಟ್ರೇಷನ್ ಕಡ್ಡಾಯವಾಗಿರುತ್ತದೆ. ಹಾಗೂ ಆನ್‌ಲೈನ್ ರಿಜಿಸ್ಟ್ರೇಷನ್ ಸೌಲಭ್ಯ ಲಭ್ಯವಿರುವುದಿಲ್ಲ.

ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆಯುವ ಎಲ್ಲಾ ಫಲಾನುಭವಿಗಳು ಕಡ್ಡಾಯವಾಗಿ ಆನ್‌ಲೈನ್ ರಿಜಿಸ್ಟ್ರೇಷನ್ ಮಾಡತಕ್ಕದ್ದು.

ಜಿಲ್ಲೆಗೆ ಸರಕಾರದಿಂದ ಲಸಿಕೆ ಬಂದ ತಕ್ಷಣ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!