ಕಾರವಾರ : ಏಪ್ರಿಲ್ 30 ರಂದು ‘ನೇರ ಫೋನ್‍ಇನ್’ ಕಾರ್ಯಕ್ರಮ

 ಕಾರವಾರ : ಏಪ್ರಿಲ್ 30 ರಂದು ‘ನೇರ ಫೋನ್‍ಇನ್’ ಕಾರ್ಯಕ್ರಮ
Share this post

ಕಾರವಾರ, ಏಪ್ರಿಲ್ 29, 2021: ಹೆಚ್ಚುತ್ತಿರುವ ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಹಳಿಯಾಳ ತಹಶೀಲ್ದಾರ್ ಕಾರ್ಯಾಲಯದಲ್ಲಿ ಏಪ್ರಿಲ್ 30 ರಂದು ಮಧ್ಯಾಹ್ನ 12 ರಿಂದ 1ರವರೆಗೆ ಕೋವಿಡ್-19 ಸಾಂಕ್ರಾಮಿಕ ರೋಗದ ಕುರಿತು ಸಾರ್ವಜನಿಕರೊಂದಿಗೆ ‘ನೇರ ಫೋನ್‍ಇನ್’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಳಿಯಾಳ ತಹಶೀಲ್ದಾರ್ ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕಾರವಾರ ಉಪ-ವಿಭಾಗಾಧಿಕಾರಿ ಮತ್ತು ಹಳಿಯಾಳ ತಾಲೂಕು ಆರೋಗ್ಯಾಧಿಕಾರಿ ಭಾಗವಹಿಸಲಿದ್ದಾರೆ.

ಹಳಿಯಾಳ ಮತ್ತು ದಾಂಡೇಲಿ ತಾಲೂಕಿನ ಸಾರ್ವಜನಿಕರು, ಕೋವಿಡ್‍ ಸೋಂಕಿತರು ದೂರವಾಣಿ ಸಂಖ್ಯೆ: 08284221134ಗೆ ಸಂಪರ್ಕಿಸಿ ಕೋವಿಡ್-19ಗೆ ಸಂಬಂಧಿಸಿದ ಅಗತ್ಯ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಅವರು ಹೇಳಿದ್ದಾರೆ.

Subscribe to our newsletter!

Other related posts

error: Content is protected !!