ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಶ್ರೀರಾಮ ಹನುಮದುತ್ಸವ

ಶ್ರೀಕೃಷ್ಣಮಠ ರಾಜಾಂಗಣದ ನರಸಿಂಹತೀರ್ಥ ವೇದಿಕೆಯಲ್ಲಿ,ಪರ್ಯಾಯ ಶ್ರೀಅದಮಾರು ಮಠದ ಆಶ್ರಯದಲ್ಲಿ,೧೫ ದಿನಗಳ ಪರ್ಯಂತ ನಡೆಯುಯುತ್ತಿರುವ “ಶ್ರೀರಾಮ ಹನುಮದುತ್ಸವ”ದಲ್ಲಿ ಬೆಂಗಳೂರಿನ ವಿದ್ವಾಂಸರಾದ ಅನಂತಶಯನ ಆಚಾರ್ಯ ಇವರು ಸಂಗ್ರಹ ರಾಮಾಯಣದ ‘ಅಯೋಧ್ಯಾಕಾಂಡ’ದ ಚಿಂತನೆ ನಡೆಸಿದರು.
ಶ್ರೀಕೃಷ್ಣಮಠ ರಾಜಾಂಗಣದ ನರಸಿಂಹತೀರ್ಥ ವೇದಿಕೆಯಲ್ಲಿ,ಪರ್ಯಾಯ ಶ್ರೀಅದಮಾರು ಮಠದ ಆಶ್ರಯದಲ್ಲಿ,೧೫ ದಿನಗಳ ಪರ್ಯಂತ ನಡೆಯುಯುತ್ತಿರುವ “ಶ್ರೀರಾಮ ಹನುಮದುತ್ಸವ”ದಲ್ಲಿ ಬೆಂಗಳೂರಿನ ವಿದ್ವಾಂಸರಾದ ಅನಂತಶಯನ ಆಚಾರ್ಯ ಇವರು ಸಂಗ್ರಹ ರಾಮಾಯಣದ ‘ಅಯೋಧ್ಯಾಕಾಂಡ’ದ ಚಿಂತನೆ ನಡೆಸಿದರು. ಉಡುಪಿಯ ವಿದ್ವಾಂಸರಾದ ವಿI ಷಣ್ಮುಖ ಹೆಬ್ಬಾರ್ ಇವರು ರಾಮಾಯಣೊತ್ತರ ಪ್ರಪಂಚದ – ಕೃಷ್ಣ – ಭೀಮರ ಕುರಿತು ಚಿಂತನೆ ನಡೆಸಿದರು. “ಶ್ರೀರಾಮ ಹನುಮದುತ್ಸವ”ದಲ್ಲಿ ಕೇರಳ ಕಲ್ಲಿಕೋಟೆಯ,ಭಾರತದ ಪುರಾತತ್ವಶಾಸ್ತ್ರಜ್ಞರಾದ ಕೆ.ಕೆ.ಮೊಹಮ್ಮದ್ ಅವರು “ಎಸ್ಪ್ಲೋರಷನ್ಸ್ ಅಂಡ್ ಎಸ್ಕ್ಯಾವಷನ್ಸ್ ಅಟ್ ಅಯೋಧ್ಯಾ” ಕುರಿತು ವೀಡಿಯೋ ಸಂವಾದ ನಡೆಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಚೆನ್ನೈ ನ ವಿ I ವಿಠ್ಠಲ್ ರಾಮಮೂರ್ತಿ ಮತ್ತು ವಿ I ವಿ.ವಿ.ಎಸ್ ಮುರಾರಿ ಇವರಿಂದ ವಯೊಲಿನ್ ಮತ್ತು ವಯೋಲಾ ದ್ವಂದ್ವ ವಾದನ ನಡೆಯಿತು.