ಹೆಸರು ನೋಂದಣಿಯ ಅವಧಿ ವಿಸ್ತರಣೆ

 ಹೆಸರು ನೋಂದಣಿಯ ಅವಧಿ ವಿಸ್ತರಣೆ
Share this post

ಕಾರವಾರ, ಮಾರ್ಚ್ 07, 2021: ಮಳೆ ನೀರು ಸಂರಕ್ಷಣೆಯ ನವೀನ ಮಾದರಿಯ ಸುಸ್ಥಿರ ಮಾದರಿ ನಿರ್ಮಾಣ ಸ್ಪರ್ಧೆಗೆ ಹೆಸರು ನೋಂದಾಯಿಸುವ ಅವಧಿಯನ್ನು ಮಾರ್ಚ್ 10 ರವರೆಗೆ ವಿಸ್ತರಿಸಲಾಗಿದೆ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಯಶವಂತ ಯಾದವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಲ ಶಕ್ತಿ ಅಭಿಯಾನ, ಮಳೆ ನೀರು ಸಂರಕ್ಷಣೆ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ನೆಹರು ಯುವಕೇಂದ್ರವು ಈ ಸ್ಪರ್ಧೆ ಏರ್ಪಡಿಸಿದೆ.

ಮೊದಲು ಹೆಸರು ನೋಂದಾಯಿಸಿದವರಿಗೆ ಆದ್ಯತೆ ನೀಡುತ್ತಿದ್ದು, ಒಳ್ಳೆಯ ಮಾದರಿಗೆ 5 ಸಾವಿರ ರೂ ಬಹುಮಾನ ನೀಡಲಾಗುತ್ತಿದೆ.

ಸ್ಪರ್ಧೆಯಲ್ಲಿ ಭಾಗವಹಿಸುವವರು ಅನಿಲ ರೇವಣಕರ, ಮೋಬೈಲ್ ಸಂಖ್ಯೆ: 9008121235 ನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!