ಟ್ಯಾಂಕರ್ ನಿಂದ ನೀರು ಪೂರೈಕೆ: ದರವಾರು ಪಟ್ಟಿಅಹ್ವಾನ

 ಟ್ಯಾಂಕರ್ ನಿಂದ ನೀರು ಪೂರೈಕೆ: ದರವಾರು ಪಟ್ಟಿಅಹ್ವಾನ
Share this post

ಕಾರವಾರ, ಮಾರ್ಚ್ 04, 2021: 2021ನೇ ಸಾಲಿನ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದಾದ ಕುಮಟಾ ತಾಲೂಕಿನ ಕೆಲವು ಗ್ರಾಮ/ ಮಜರೆಗಳಿಗೆ ತುರ್ತು ಟ್ಯಾಂಕರ್ ಮೂಲಕ ನೀರು ಪೂರೈಸಲು ಜಿಲ್ಲಾಧಿಕಾರಿ ನಿರ್ದೇಶನದ ಅನ್ವಯ ಕ್ರಮಕೈಗೊಂಡಿದ್ದು, ಗುತ್ತಿಗೆದಾರರಿಂದ ದರವಾರು ಪಟ್ಟಿಆಹ್ವಾನಿಸಲಾಗಿದೆ.

ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲು ಆಸಕ್ತಿಯುಳ್ಳವರು ದರವಾರು ಪಟ್ಟಿಯನ್ನು ಮಾರ್ಚ್ 8ರಂದು ಮಧ್ಯಾಹ್ನ 3ರೊಳಗಾಗಿ ಕುಮಟಾ ತಹಶೀಲ್ದಾರ್ ಕಾರ್ಯಾಲಯಕ್ಕೆ ತಲುಪುವಂತೆ ಸೀಲು ಮಾಡಿದ ಲಕೋಟಿಯಲ್ಲಿ ಸಲ್ಲಿಸಬಹುದು.

ಸ್ವೀಕೃತ ಟೆಂಡರ್ ಲಕೋಟೆಗಳನ್ನು ನಿಯಮಾನುಸಾರ ಮಾರ್ಚ್ 8 ರಂದು ಸಂಜೆ 4 ಕ್ಕೆ ತೆರೆಯಲಾಗುತ್ತದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರಣೆ ಹಾಗೂ ಟೆಂಡರ್ ನಮೂನೆಗಾಗಿ ದೂರವಾಣಿ ಸಂಖ್ಯೆ: 08386-222054ಗೆ ಕಚೇರಿ ಅವಧಿಯಲ್ಲಿ ಸಂಪರ್ಕಿಸಬಹುದು ಎಂದು ಕುಮಟಾ ತಹಶೀಲ್ದಾರ್ ಮೇಘರಾಜ್‍ ಎನ್. ನಾಯ್ಕ್‍ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!