ದೂರಶಿಕ್ಷಣ ಕಾರ್ಯಕ್ರಮ – ಅ. 27 ರಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆ

 ದೂರಶಿಕ್ಷಣ ಕಾರ್ಯಕ್ರಮ – ಅ. 27 ರಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆ
Share this post

ಮಂಗಳೂರು ಅ 10 :– ಮಂಗಳೂರು ವಿಶ್ವವಿದ್ಯಾನಿಲಯ ದೂರಶಿಕ್ಷಣ ಕಾರ್ಯಕ್ರಮದಡಿಯಲ್ಲಿ ಅಕ್ಟೋಬರ್ 15 ರಿಂದ ಪ್ರಾರಂಭವಾಗಬೇಕಾಗಿದ್ದ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದ್ದು, ಈ ಪರೀಕ್ಷೆಯು ಅಕ್ಟೋಬರ್ 27 ರಿಂದ ಪ್ರಾರಂಭವಾಗಲಿದೆ.

ಪರಿಷ್ಕೃತ ವೇಳಾಪಟ್ಟಿ ಮತ್ತು ಪರೀಕ್ಷಾ ಕೇಂದ್ರಗಳ ವಿವರವು ಮಂಗಳೂರು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‍ಸೈಟ್ www.mangaloreuniversity.ac.in ನಲ್ಲಿ ಲಭ್ಯವಿರುತ್ತದೆ. ಈ ಬದಲಾವಣೆಯನ್ನು ದೂರಶಿಕ್ಷಣದ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷಾ ಅಭ್ಯರ್ಥಿಗಳು ಗಮನಿಸುವಂತೆ ಕುಲಸಚಿವರ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

error: Content is protected !!