ಉಡುಪಿ ಶ್ರೀ ಕೃಷ್ಣ ಮಠಕ್ಕೆ ಎಡನೀರು ಸಂಸ್ಥಾನದ ನಿಯೋಜಿತ ಪೀಠಾಧಿಪತಿ ಭೇಟಿ

 ಉಡುಪಿ ಶ್ರೀ ಕೃಷ್ಣ ಮಠಕ್ಕೆ ಎಡನೀರು ಸಂಸ್ಥಾನದ ನಿಯೋಜಿತ  ಪೀಠಾಧಿಪತಿ ಭೇಟಿ
Share this post

ಉಡುಪಿ ಅ 09: ಎಡನೀರು ತೋಟಕಾಚಾರ್ಯ ಸಂಸ್ಥಾನದ ಪೀಠಾಧಿಪತಿಗಳಾಗಿ ದೀಕ್ಷಿತರಾಗಲಿರುವ ಶ್ರೀ ಜಯರಾಮ ಮಂಜತ್ತಾಯರು ತಮ್ಮ ಸನ್ಯಾಸ ದೀಕ್ಷಾ ಪೂರ್ವಭಾವಿ ತೀರ್ಥ ಕ್ಷೇತ್ರ ಸಂಚಾರ ನಿಮಿತ್ತ ಗುರುವಾರ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದರು.

ಶ್ರೀ ಕೃಷ್ಣಮುಖ್ಯಪ್ರಾಣರ ದರ್ಶನ ಪಡೆದ ಬಳಿಕ ಶ್ರೀ ಮದನಂತೇಶ್ವರ ಸನ್ನಿಧಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಅಲ್ಲಿರುವ ಜಗದ್ಗುರು ಶ್ರೀ ಮಧ್ವಾಚಾರ್ಯರ ಅದೃಶ್ಯ ಸನ್ನಿಧಾನದ ದರ್ಶನ ಪಡೆದು ಭಕ್ತಿ ಸಮರ್ಪಸಿದರು. ಪರ್ಯಾಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.

ಬಳಿಕ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ತೀರ್ಥರನ್ನು, ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ತೀರ್ಥರನ್ನು, ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ತೀರ್ಥರನ್ನು ಹಾಗೂ  ಕಿರಿಯ  ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ತೀರ್ಥರನ್ನು ಭೇಟಿ ಮಾಡಿ ಅನುಗ್ರಹ ಮಂತ್ರಾಕ್ಷತೆ ಪಡೆದರು.

ಎಲ್ಲ ಮಠಾಧೀಶರೂ ಎಡನೀರು ಮಠದ ಕೀರ್ತಿಶೇಷ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಸಾಧನೆಗಳು , ಉದಾರ ಗುಣ , ಆತಿಥ್ಯ , ಬಾಂಧವ್ಯಗಳನ್ನು ವಿಶೇಷವಾಗಿ ಸ್ಮರಿಸಿ ಅದೇ ರೀತಿಯ ನಂಟು ಮುಂದುವರೆಸುವುದಾಗಿ ಜಯರಾಮ ಮಂಜತ್ತಾಯರಿಗೆ ಭರವಸೆ ನೀಡಿ , ಮುಂಬರುವ ವಿಜಯದಶಮೀಯಂದು ನಡೆಯಲಿರುವ ಸನ್ಯಾಸ ದೀಕ್ಷಾ ಕಾರ್ಯಕ್ರಮಗಳಿಗೆ ಶುಭಕೋರಿದರು .

ಈ ಸಂದರ್ಭದಲ್ಲಿ ಪರ್ಯಾಯ  ಮಠದ ವ್ಯವಸ್ಥಾಪಕರಾದ ಗೋವಿಂದರಾಜ್, ಕಡೆಕಾರ್  ಶ್ರೀಶ ಭಟ್,ಕುಂಟಾರು ರವೀಶ ತಂತ್ರಿ, ವಾಸುದೇವ ಭಟ್ ಪೆರಂಪಳ್ಳಿ ಮೊದಲಾದವರು ಉಪಸ್ಥಿತರಿದ್ದರು.   

Subscribe to our newsletter!

Other related posts

error: Content is protected !!