ಧರ್ಮಸ್ಥಳದಲ್ಲಿ ಪ್ರಾರ್ಥನಾ ಸಮಾವೇಶ

 ಧರ್ಮಸ್ಥಳದಲ್ಲಿ ಪ್ರಾರ್ಥನಾ ಸಮಾವೇಶ
Share this post

ಧರ್ಮಸ್ಥಳ, ಅ 03: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ‘ಪ್ರಾರ್ಥನಾ ಸಮಾವೇಶ’ ವು ಇಂದು ನಡೆಯಿತು.

ಶ್ರೀ ಕ್ಷೇತ್ರದಲ್ಲಿ 22 ನೇ ವರ್ಷದ ಭಜನಾ ತರಬೇತಿ ಕಮ್ಮಟದ ಬದಲಾಗಿ ಸಾಂಕೇತಿಕವಾಗಿ ಈ ಬಾರಿ ‘ಪ್ರಾರ್ಥನಾ ಸಮಾವೇಶ’ ವು ನಡೆಯಿತು.

“ಹೆಚ್ಚು ಜನ ಸೇರಿದರೆ ಅಪಾಯವೆಂದು ಅರಿತು ಸಾಂಕೇತಿಕವಾಗಿ ಈ ವರ್ಷ ‘ಪ್ರಾರ್ಥನಾ ಸಮಾವೇಶ’ವನ್ನು ನಡೆಸಿದ್ದೇವೆ. ಮುಂದಿನ ವರ್ಷದಿಂದ ಲಕ್ಷಾಂತರ ಜನರಿಗೆ ಭಜನಾ ಕಮ್ಮಟದ ತರಬೇತಿಯನ್ನು ವೀಕ್ಷಿಸಲು ಆನ್‍ಲೈನ್ ಮೂಲಕ ವ್ಯವಸ್ಥೆ ಮಾಡುವ ಬಗ್ಗೆ ಚಿಂತನೆ ಮಾಡಲಾಗುವುದು,” ಎಂದು ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರು ನುಡಿದರು.

“ಭಜನೆಯಿಂದ ಸಂಘಟನಾ ಶಕ್ತಿ, ಭಜನಾ ಮಂಡಳಿಗಳು ಉತ್ತಮ ರೀತಿಯಲ್ಲಿ ಭಜನಾ ಕಾರ್ಯಕ್ರಮವನ್ನು ನಡೆಸುತ್ತಿರುವುದರಿ0ದ ಭಜನೆಯ ಬಗ್ಗೆ ಗೌರವ, ಶ್ರದ್ಧೆ, ಭಕ್ತಿ ಹೆಚ್ಚಾಗಿದೆ,” ಎಂದರು.

ಅಕ್ಟೊಬರ್ 3 ರಂದು ನಡೆದ ಪ್ರಾರ್ಥನಾ ಸಮಾವೇಶದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಮನೋರಮಾ ತೋಳ್ಪಾಡಿತ್ತಾಯ, ಶ್ರೀ ರಾಮಕೃಷ್ಣ ಕಾಟುಕುಕ್ಕೆ ಹಾಗೂ ಶ್ರೀ ರಾಜೇಶ್ ಪಡಿಯಾರ್ ಮುಂತಾದ ಕಲಾವಿದರು ಶಿಬಿರಾರ್ಥಿಗಳಿಗೆ ಭಜನಾ ಅಭ್ಯಾಸವನ್ನು ಮಾಡಿಸಿದರು. ಹಿಮ್ಮೇಳದಲ್ಲಿ ಶ್ರೀ ಮಂಗಲದಾಸ ಗುಲ್ವಾಡಿ, ಹಾಗೂ ಶ್ರೀ ದೇವದಾಸ್ ಪ್ರಭು ಸಹಕರಿಸಿದರು.

ಪ್ರಾರ್ಥನಾ ಸಮಾವೇಶದಲ್ಲಿ ಶ್ರೀ ಮೋಹನದಾಸ ಸ್ವಾಮಿಜಿ, ಶ್ರೀಧಾಮ ಮಾಣಿಲ, ಇವರು ಮಾರ್ಗರ್ದರ್ಶನ ನೀಡುತ್ತಾ ಸಮಾಜದ ಜನಸಾಮಾನ್ಯರಲ್ಲಿ ಧಾರ್ಮಿಕ ಭಾವನೆ ಉಳಿಸುವ ಪ್ರಯತ್ನ ಭಜನಾ ಕಮ್ಮಟದಿ0ದ ಸಾಧ್ಯಾವಾಗಿದೆ. ಮಾನವೀಯ ಮೌಲ್ಯವನ್ನು ನಮ್ಮಲ್ಲಿ ಅಳವಡಿಸಿಕೊ0ಡು ಪ್ರಕೃತಿ ಮತ್ತು ನಿಸರ್ಗವನ್ನು ಸ0ರಕ್ಷಿಸಿ ಮು0ದಿನ ಪೀಳಿಗೆಗೆ ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮನಸ್ಸನ್ನು ಪರಿಶುದ್ಢಮಾಡಿ ಭಗವ0ತನನ್ನು ಪ್ರಾರ್ಥಿಸಿ ಎ0ದು ಸ0ದೇಶವನ್ನು ನೀಡಿದರು.

ಮುಖ್ಯ ಅಥಿತಿಗಳಾದ ಡಾ. ಗಣೇಶ್ ಅಮೀನ್ ಸ0ಕಮಾರ್ ಇವರು ಭಗವ0ತನ ಜಪಿಸಿ ನೆಲೆಯಾಗುವುದೇ ‘ಭಜನೆ’. ಆಡಂಬರದ ಸಂಪತ್ತು ಬದುಕಲ್ಲ, ದೇವರ ಆರಾಧನೆಯೇ ಬದುಕಿನ ಸಾರ್ಥಕತೆ ಎಂದು ಶುಭನುಡಿದರು.

ಭಜನಾ ಕಮ್ಮಟದ ಸ0ಚಾಲಕರಾದ ಶ್ರೀ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿ , ಶ್ರೀ ಶ್ರೀನಿವಾಸ್ ರಾವ್ ಕಾರ್ಯಕ್ರಮ ನಿರೂಪಿಸಿದರು, ಶ್ರೀಮತಿ ಮಮತಾ ರಾವ್ ವ0ದಿಸಿದರು.

Subscribe to our newsletter!

Other related posts

error: Content is protected !!