ಟೆಂಪೋ, ರಿಕ್ಷಾ, ಕಾರು ನಿಲ್ದಾಣ ನಿರ್ಮಿಸಲು ಪ್ರತ್ಯೇಕ ನೀತಿಗೆ ಐವನ್ ಡಿಸೋಜ ಆಗ್ರಹ

 ಟೆಂಪೋ, ರಿಕ್ಷಾ, ಕಾರು ನಿಲ್ದಾಣ ನಿರ್ಮಿಸಲು ಪ್ರತ್ಯೇಕ ನೀತಿಗೆ ಐವನ್ ಡಿಸೋಜ ಆಗ್ರಹ
Share this post
ಐವನ್ ಡಿಸೋಜ ನೇತೃತ್ವದಲ್ಲಿ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು

ಮಂಗಳೂರು ಅ 01: ಮಂಗಳೂರು ನಗರದ ಹಲವೆಡೆ ಅನೇಕ ವರ್ಷಗಳಿಂದ ನೊಂದಾಯಿತರಾಗಿರುವ ಗೂಡ್ಸ್ ಟೆಂಪೋ, ರಿಕ್ಷಾ, ಕಾರು ನಿಲ್ದಾಣಗಳನ್ನು ವಿವಿಧ ಕಾರಣಗಳನ್ನು ನೀಡಿ ನಿಲ್ದಾಣದ ಸ್ಥಳವನ್ನು ಆಕ್ರಮಿಸಿರುವುದು ಖಂಡನೀಯ ಎಂದು ದ.ಕ ಜಿಲ್ಲಾ ಕಾರ್ಮಿಕ ಪರಿಷತ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಐವನ್ ಡಿ ಸೋಜ ಖಂಡಿಸಿದ್ದಾರೆ.

ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಕಾರ್ಮಿಕರ ಪರವಾಗಿ ಹೋರಾಟ ಮಾಡುವುದು ಅನಿವಾರ್ಯ ಎಂದು ಹೇಳಿದರು.

ಐವನ್ ಡಿ ಸೋಜ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು, ಮೇಯರ್ ಮತ್ತು ವಿರೋಧಪಕ್ಷ ನಾಯಕರುಗಳಿಗೆ ಸಂಘಟನೆಗಳ ಪರವಾಗಿ ಮನವಿ ಸಲ್ಲಿಸಲಾಯಿತು.

ಬಸ್ ನಿಲ್ದಾಣ ಇದ್ದಂತೆ ಈ ವರ್ಗದ ಕಾರ್ಮಿಕರಿಗೂ ಪಾರ್ಕಿಂಗ್ ಸೌಕರ್ಯ ಒದಗಿಸಿಕೊಡಬೇಕು ಮತ್ತು ಈ ವರ್ಗದ ಕಾರ್ಮಿಕರಿಗೆ ನಗರ ಪಾಲಿಕೆಯ ವತಿಯಿಂದ ವಿಮಾ ಯೋಜನೆ ಜಾರಿಗೆ ತರಬೇಕು, ಈ ಬಗ್ಗೆ ನಗರ ಪಾಲಿಕೆ ನೀತಿಯೊಂದನ್ನು ಪ್ರಕಟಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾಜಿ ಮೇಯರ್ ಕೆ.ಭಾಸ್ಕರ್, ಉಪಮೇಯರ್ ಮೊಹಮ್ಮದ್ ಕುಂಜತ್ತ್ ಬೈಲ್, ಮಾಜಿ ನಗರಪಾಲಿಕೆ ಸದಸ್ಯರುಗಳಾದ ದೀಪಕ್ ಪೂಜಾರಿ, ರಿಕ್ಷಾ ಮತ್ತು ಗೂಡ್ಸ್ ಟೆಂಪೋ ಪದಾಧಿಕಾರಿಗಳು ಭಾಗವಹಿಸಿದರು.

Subscribe to our newsletter!

Other related posts

error: Content is protected !!