ಮಿಲಿಟರಿ – ಕುಟುಂಬ ಪಿಂಚಣಿಗಾಗಿ ಹೆಸರು ನೊಂದಾವಣೆ

 ಮಿಲಿಟರಿ – ಕುಟುಂಬ ಪಿಂಚಣಿಗಾಗಿ ಹೆಸರು ನೊಂದಾವಣೆ
Share this post

ಮಂಗಳೂರು ಸೆ 14 : ಮಿಲಿಟರಿ ಕುಟುಂಬ ಪಿಂಚಣಿ ವಿಳಂಬವಾಗುತ್ತಿರುವ ಬಗ್ಗೆ ಹೆಚ್ಚಿನ ದೂರುಗಳು ಬರುತ್ತಿವೆ. ಆದರೆ,   ಮಾಜಿ ಸೈನಿಕರು ಜೀವಂತವಿರುವಾಗಲೇ ಪತ್ನಿ ಹಾಗೂ ದಿವ್ಯಾಂಗ ಮಕ್ಕಳ ಹೆಸರನ್ನು ಮಿಲಿಟಿರಿ ದಾಖಲಾತಿಯಲ್ಲಿ ನೊಂದಾಯಿಸದೇ ಇರುವುದು ಕಂಡು ಬಂದಿರುತ್ತದೆ.

ಈ ರೀತಿ ನೊಂದಾಯಿಸದಿದ್ದಲ್ಲಿ ಕುಟುಂಬ ಪಿಂಚಣಿ ಪಾವತಿ ವಿಳಂಬವಾಗುತ್ತಿದೆ. ಆದ್ದರಿಂದ ಈ ಪ್ರಕ್ರಿಯೆಯನ್ನು ಮಾಜಿ ಸೈನಿಕರು ಪೂರ್ತಿಗೊಳಿಸಿದಲ್ಲಿ ಅವರ ಕುಟುಂಬದವರು ಯಾವುದೇ ಅಡಚಣೆ ಇಲ್ಲದೇ ಕುಟುಂಬ ಪಿಂಚಣಿ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಜಂಟಿ ನಿರ್ದೇಶಕರು ಕಾರ್ಯಾಲಯ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts