ಶ್ರೀ ವೆಂಕಟರಮಣ ದೇವಸ್ಥಾನ ದಲ್ಲಿ ಲೋಕ ಕಲ್ಯಾಣಾರ್ಥ ವಿಶೇಷ ಪ್ರಾರ್ಥನೆ

 ಶ್ರೀ ವೆಂಕಟರಮಣ  ದೇವಸ್ಥಾನ ದಲ್ಲಿ ಲೋಕ ಕಲ್ಯಾಣಾರ್ಥ ವಿಶೇಷ ಪ್ರಾರ್ಥನೆ
Share this post

ಮಂಗಳೂರು, ಸೆ 13: ಇಂದು ಬೆಳಗ್ಗೆ 6 ಗ್ರಹಗಳು ಸ್ವಕ್ಷೇತ್ರ ದಲ್ಲಿ ಇದ್ದ ಶುಭಕಾಲದಲ್ಲಿ ಶ್ರೀ ವೆಂಕಟರಮಣ ದೇವಸ್ಥಾನ ದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಛಾಯಾಗ್ರಹಗಳಾದ ರಾಹು-ಕೇತುಗಳನ್ನು ಹೊರತುಪಡಿಸಿ, ಮಿಕ್ಕ ಏಳು ಗ್ರಹಗಳಲ್ಲಿ ಆರು ಗ್ರಹಗಳು ತಮ್ಮ ಸ್ವಕ್ಷೇತ್ರಗಳಲ್ಲಿ ಇರುವುದು ಇಂದಿನ ವಿಶೇಷವಾಗಿತ್ತು.

ಲೋಕ ಕಲ್ಯಾಣಾರ್ಥವಾಗಿ ಇಡೀ ಪ್ರಪಂಚಕ್ಕೆ ತಗಲಿದ ಮಹಾಮಾರಿಯು ಶೀಘ್ರವಾಗಿ ತೊಲಗಲಿ , ಶ್ರೀ ದೇವಳಗಳಲ್ಲಿ ನಡೆಯುವ ಎಲ್ಲಾ ಪೂಜಾ ಕೈ೦ಕರ್ಯಗಳು ಹಿಂದಿನಂತೆ ಸುಸೂತ್ರವಾಗಿ ನಡೆಯಲಿ , ಜನರ ಕಷ್ಟಗಳು ಬೇಗನೆ ನಿವಾರಣೆ ಯಾಗಲಿ ಎಂಬ ಹಿತ ದ್ರಷ್ಟಿಯಿಂದ 11:30 ಘಂಟೆಗೆ (ವೃಶ್ಚಿಕ ಲಗ್ನ) ದೇವಳದ ಆಡಳಿತ ಮಂಡಳಿ , ವೈದಿಕ ರು ಹಾಗೂ ಸಮಾಜ ಬಾಂಧವರು ಎಲ್ಲರೊಡಗೂಡಿ ಶ್ರೀ ವೀರ ವೆಂಕಟೇಶ ದೇವರ ಸನ್ನಿಧಾನದಲ್ಲಿ ಮಹಾ ಪ್ರಾರ್ಥನೆ ಸಲ್ಲಿಸಲಾಯಿತು .

ಈ ಸಂದರ್ಭದಲ್ಲಿ ದೇವಳದ ಮೊಕ್ತೇಸರರಾದ ಕೆ . ಪಿ . ಪ್ರಶಾಂತ್ ರಾವ್ ಹಾಗೂ ನೂರಾರು ಭಜಕರು ಉಪಸ್ಥಿತರಿದ್ದರು .


ಚಿತ್ರ : ಮಂಜು ನೀರೇಶ್ವಾಲ್ಯ

Subscribe to our newsletter!

Other related posts