ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿಉಚಿತ ಆರೋಗ್ಯ ಶಿಬಿರ

 ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿಉಚಿತ ಆರೋಗ್ಯ ಶಿಬಿರ
Share this post

ಬೆಳ್ತಂಗಡಿ, ಸೆ 09: ರೋಟರಿ ಕ್ಲಬ್ ಬೆಳ್ತಂಗಡಿ ರೋಟರಿ ಕ್ಲಬ್ ಮಡಂತ್ಯಾರು ಯುವ ವಕೀಲರ ವೇದಿಕೆ ಬೆಳ್ತಂಗಡಿ ಮಾನವ ಹಕ್ಕುಗಳ ವೇದಿಕೆ ಬೆಳ್ತಂಗಡಿ (ರಿ ) ಸ್ಪಂದನ ಪಾಲಿ ಕ್ಲಿನಿಕ್ ಮತ್ತು ಪೊಲೀಸ್ ಇಲಾಖೆ ಸಹಭಾಗಿತ್ವದಲ್ಲಿ 3 ನೇ ಉಚಿತ ಆರೋಗ್ಯ ಶಿಬಿರ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ನಡೆಯಿತು.

ಈ ಸಂಧರ್ಭದಲ್ಲಿ ರೋಟರಿ ಕ್ಲಬ್ ಬೆಳ್ತಂಗಡಿ ರೋಟರಿ ಕ್ಲಬ್ ಮಡಂತ್ಯಾರು ವತಿಯಿಂದ ಪೊಲೀಸ್ ಠಾಣೆಗೆ 2 ಪ್ರಥಮ ಚಿಕಿತ್ಸಾ ಕಿಟ್ ನೀಡಲಾಯಿತು.

ಎಸೈ ಸೌಮ್ಯ ಜೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅಥಿಗಳ ಜಯಂತ ಶೆಟ್ಟಿ, ಅಧ್ಯಕ್ಷತೆ ವಹಿಸಿದ ಬಿ. ಕೆ. ಧನಂಜಯ ರಾವ್ ಮಾತನಾಡಿದರು.

ಈ ಸಂಧರ್ಭದಲ್ಲಿ ಬೀಟ್ ಪೊಲೀಸ್ ಶಂಕರ್ ಅವರನ್ನು ಸನ್ಮಾನಿಸಲಾಯಿತು. ಪ್ರಶಾಂತ್ ಎಂ ಕಾರ್ಯಕ್ರಮ ನಿರೂಪಿಸಿ, ನವೀನ್ ಬಿ. ಕೆ ಧನ್ಯವಾದ ಸಮರ್ಪಿಸಿದರು.

Subscribe to our newsletter!

Other related posts